ಮುನ್ನೋಟ ಟ್ರಸ್ಟ್

ಮುನ್ನೋಟ ಟ್ರಸ್ಟ್

facebook/arime.org ಕಾರ್ಯಕ್ರಮ ಶುರುವಾಗಲು ಉಳಿದಿರುವ ಸಮಯ

  • 00ದಿನಗಳು
  • 00ಗಂಟೆಗಳು
  • 00ನಿಮಿಷಗಳು

ಯೋಜನೆಗಳು

ಕನ್ನಡ ಜಗತ್ತಿನ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದು. ಬರಹದ ರೂಪದಲ್ಲಿ ಸಿಕ್ಕಿರುವ ಆಧಾರಗಳ ಮೇಲೆ ಅದಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಂತಹ ನುಡಿ ಕಳೆದ ಎರಡು ಸಾವಿರ ವರ್ಷಗಳ ಅವಧಿಯ ಎಲ್ಲ ಸವಾಲುಗಳನ್ನು ದಾಟಿಕೊಂಡು ಉಳಿದು ಇಪ್ಪತ್ತೊಂದನೆಯ ಶತಮಾನಕ್ಕೆ ಕಾಲಿಟ್ಟಿದೆ, ಆದರೆ ಜಾಗತೀಕರಣ ತಂದಿರುವ ಅತ್ಯಂತ ವೇಗದ ತಂತ್ರಜ್ಞಾನ ಮತ್ತು ವ್ಯಾಪಾರದ ಬದಲಾವಣೆಗಳು ಕನ್ನಡದ ಮುಂದೆ ಹಿಂದೆಂದೂ ಇರದ ಹಲವಾರು ಸವಾಲುಗಳನ್ನು ತಂದೊಡ್ಡುವ ಜೊತೆಗೆ ಕನ್ನಡವೊಂದು “ಪಡೆದುಕೊಳ್ಳುವ” ಭಾಷೆಯಾಗಿ ಉಳಿಯುವಂತೆ ಮಾಡಿದೆ. ಹೀಗೆ ಪಡೆದುಕೊಳ್ಳುವ ಮಟ್ಟದಲ್ಲಿ ಉಳಿದ ಕಾರಣದಿಂದಾಗಿಯೇ ಕನ್ನಡ ಕಲಿಕೆ, ದುಡಿಮೆಯ ವಿಷಯದಲ್ಲಿ ಸೊರಗುತ್ತಿದೆ.

ಈ ಬದಲಾವಣೆಯನ್ನು ತಿಳಿದು, ಅದಕ್ಕೆ ತಕ್ಕ ದೂರಗಾಮಿ ನೆಲೆಯ ಕೆಲಸಗಳನ್ನು ಕನ್ನಡಿಗರು ಮಾಡುತ್ತ ಹೋದಲ್ಲಿ ಇಂದಲ್ಲದಿದ್ದರೂ ಕೆಲ ದಶಕಗಳಲ್ಲಿ ಕನ್ನಡವೂ ಒಂದು “ಕೊಡುವ” ಭಾಷೆಯಾಗಿ ಬದಲಾಗಬಹುದು. ಇದು ಆದಾಗ ಕನ್ನಡದಲ್ಲೂ ಪ್ರಪಂಚದ ಎಲ್ಲ ಅರಿವಿನ ಕವಲುಗಳನ್ನು ಕಟ್ಟುವುದು ಸಾಧ್ಯವಾಗಬಹುದು. ಇಂತಹದೊಂದು ಕನಸು ಈಡೇರಲು ಏನು ಬೇಕು ಅನ್ನುವ ಸುತ್ತ ಚಿಂತಿಸುವ, ಜಾಗೃತಿ ಮೂಡಿಸುವ, ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಕೆಲಸ ಮಾಡುವ ವೃತ್ತಿಪರ ಕನ್ನಡಪರರು ಸೇರಿ ನಡೆಸುತ್ತಿರುವ ಒಂದು ಸಂಸ್ಥೆ “ಮುನ್ನೋಟ ಟ್ರಸ್ಟ್” ಆಗಿದೆ.